ಮುರಾದ್ - 
 	ಮೊಗಲ್ ಚಕ್ರವರ್ತಿ ಷಹಜಹಾನನ ನಾಲ್ಕನೆಯ ಮಗ. ತಂದೆಯ ಅವಸಾನಕ್ಕೆ ಮುಂಚೆ ಗುಜರಾತಿನ ಪ್ರಾಂತ್ಯಾಧಿಕಾರಿಯಾಗಿದ್ದ ಷಹಜಹಾನ್ ಅಸ್ವಸ್ಥನಾಗಲು (1657) ಆತನ ಮಕ್ಕಳು ಸಿಂಹಾಸನಕ್ಕಾಗಿ ಯಾದವೀ ಕಲಹದಲ್ಲಿ ತೊಡಗಿದರು. ಚತುರಮತಿ ಔರಂಗeóÉೀಬ್ ಪಂಜಾಬ್, ಸಿಂಧ್ ಕಾಶ್ಮೀರ್ ಮತ್ತು ಆಫ್ಘಾನಿಸ್ತಾನಗಳನ್ನು ಮುರಾದನಿಗೆ ಕೊಡುವುದಾಗಿ ನಂಬಿಸಿ, ತನ್ನ ಪಕ್ಷಕ್ಕೆ ಒಲಿಸಿಕೊಂಡ. ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಈತ ಔರಂಗeóÉೀಬನ ಕುಟಿಲನೀತಿಗೆ ಬಲಿಯಾದ. ಇವನನ್ನು ಔರಂಗeóÉೀಬ್ ಗ್ವಾಲಿಯರ್ ಸೆರೆಮನೆಯಲ್ಲಿ ಇಟ್ಟ (1659). ದಿವಾನ್ ಆಲಿನಾಬಿ ಎಂಬುವನನ್ನು ಕೊಲ್ಲಿಸಿದನೆಂಬ ಅಪಾದನೆಯ ಮೇಲೆ ಮುರಾದನನ್ನು ಕೊಲ್ಲಿಸಿದ (1661).
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ